ಪ್ರಿಯ ವಿಶ್ವ ಕನ್ನಡಿಗರೇ,

ನನ್ನ ಹೆಸರು ರಮೇಶ್ ಮೇಲ್ಕೋಟೆ. ಟೆಕ್ಸಾಸ್ ರಾಜ್ಯದ ಕೊಪ್ಪೆಲ್ ನಗರದ ವಾಸಿ.  ೧೯೯೪ ಇಸವಿ ಇಂದ, ಸ್ಥಳೀಯ ಮಲ್ಲಿಗೆ ಕನ್ನಡ ಸಂಘದ ಉತ್ಸಾಹಿ ಸದಸ್ಯ ಹಾಗು ಸ್ವಯಂಸೇವಕ. “ಯಾವ  ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು” ಕನ್ನಡದ ಶ್ರೇಷ್ಠ ಕವಿ ಶ್ರೀ ಗೋಪಾಲಕೃಷ್ಣ ಅಡಿಗ ಅವರ ಈ ಕವಿತೆ ಹೊರನಾಡು ಕನ್ನಡಿಗರ ಜೀವನದಲ್ಲಿ ಮರುಕಳಿಸಿ ಮನಸ್ಸಿನ ಜಂಜಾಟವನ್ನು ಬಣ್ಣಿಸುತ್ತದೆ.  ತನ್ನ ಮಣ್ಣನ್ನು ಬಿಡಲು ಪ್ರತಿಯೊಬ್ಬ ವಲಸೆಗಾರನಿಗೆ ಒಂದೊಂದು ಕಾರಣವಿರಬಹುದು. ತಾಯಿನಾಡಿನಿಂದ ದೂರ ನೆಲಸಿ, ಹೊಸ ದೇಶ, ಅಪರಿಚಿತ ಸಂಸ್ಕೃತಿಯಲ್ಲಿ ಬಹಳಷ್ಟು ಅಡಚಣೆಗಳನ್ನು ಎದುರಿಸಿ ಶ್ರಮ ಪಟ್ಟು ದುಡಿದು ಬಾಳುವರು. ರಾಷ್ಟ್ರಕವಿ ಕುವೆಂಪು ಹೇಳಿದ “ಎಲ್ಲೇ ಇರು ಹೇಗೆ ಇರು ಎಂದೆಂದೂ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ“, “ನೀ ಮೆಟ್ಟುವ ನೆಲ ಅದೇ ಕರ್ನಾಟಕ”  ಎಂಬ ಯುಕ್ತಿಯನ್ನು ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ಸಮಕಾಲೀನ ವಿಷಯಗಳ ಬಗ್ಗೆ ಬರೆದ ಕಥೆ, ಕವನ, ನಾಟಕ, ಇತ್ಯಾದಿಗಳನ್ನೂ ಓದಿ, ಬರೆದು, ಆನಂದಿಸುವ ಮೂಲಕ ಪಾಲಿಸುತ್ತಿರುವರು.

ನಮ್ಮ ಸಂಸ್ಕೃತಿ, ಸಮಾಜದಿಂದ ದೂರ ಬಂದರೂ, ನಮ್ಮೆಲ್ಲರ ಮನಸ್ಸನ್ನು ಸೂರೆಗೊಂಡಿರುವುದು ನಮ್ಮ ಮಾತೃ ಭಾಷೆ ಕನ್ನಡ. ನಮ್ಮೆಲ್ಲರ ಪ್ರೀತಿಯ ಡಿ.ವಿ.ಜಿ ಯವರು  ಮಂಕುತಿಮ್ಮನ ಕಗ್ಗದಲ್ಲಿ:

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು

ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ

ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ

ಜಸವು ಜನಜೀವನಕೆ ಮಂಕುತಿಮ್ಮ

ಪಂಪ, ರನ್ನ, ಬಸವೇಶ್ವರ,ಹರಿಹರ,ಕುಮಾರವ್ಯಾಸ,ಕುವೆಂಪು,ಬೇಂದ್ರೆ, ಮಾಸ್ತಿ, ಕಾರಂತ್, ಗೋಕಾಕ್, ಕಾರ್ನಾಡ್, ಅನಂತ್ ಮೂರ್ತಿ, ಭೈರಪ್ಪ ಅವರುಗಳಿಂದ ಬೆಳೆದ ಈ ಪ್ರಬುದ್ಧ ಭಾಷೆಯನ್ನು ನಾವು ಉಳಿಸಿ, ಮುಂದಿನ ಪೀಳಿಗೆಯವರು ಇನ್ನು ಬೆಳಸಲು ನೆರವಾಗಬೇಕು. ಕರುನಾಡು ದೇವಿಯ ಸುಪುತ್ರರಾದ ಮಾನನೀಯ ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ” ಸಂದೇಶವನ್ನು ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಸಂಘಗಳ ಮತ್ತು ಕನ್ನಡ ಸಮ್ಮೇಳನಗಳ ಮೂಲಕ ಸತತವಾಗಿ ಸಾರುತ್ತಿದ್ದಾರೆ. ಅಂತಹ ಒಂದು ಸಂಸ್ಥೆಯಾದ “ನಾವಿಕ – ನಾವು ವಿಶ್ವ ಕನ್ನಡಿಗರು” , ತನ್ನ ನಾಲ್ಕನೇ ವಿಶ್ವ ಕನ್ನಡ ಸಮ್ಮೇಳನವನ್ನು ಈ ವರ್ಷ ಡಲ್ಲಾಸ್-ಫೊರ್ಟ್ವರ್ಥ್ ಮಹಾನಗರದಲ್ಲಿ ಆಯೋಜಿಸಲು ನಿರ್ಧರಿಸಿದೆ.  ನನ್ನ ಕನ್ನಡ ಬಂಧು ಮಿತ್ರರ, ನಮ್ಮ ಮಲ್ಲಿಗೆ ಸಂಘದ ಮತ್ತು ಟೆಕ್ಸಾಸ್ ರಾಜ್ಯದ ಪ್ರಮುಖ ಕನ್ನಡ ಸಂಘಗಳ ಅಭಿಮಾನ, ಪ್ರೋತ್ಸಾಹ ಮತ್ತು ಸಹಕಾರದಿಂದ ನಾನು ಈ ಸಮಾರಂಭಕ್ಕೆ ಸಂಚಾಲಕನಾಗಿ ಕಾರ್ಯ ನಿರ್ವಹಿಸಲು ಮುನ್ನುಗಿದ್ದೇನೆ. ಒಂದಕ್ಕಿಂತ ಹೆಚ್ಚು ಸ್ಥಳೀಯ ಕನ್ನಡ ಕೂಟಗಳು ಒಟ್ಟುಗೂಡಿ, ಕೈ ಜೋಡಿಸಿ ಈ ಹಬ್ಬವನ್ನು ವಿಜೃಂಭಣೇಯಿಂದ ಆಚರಿಸಲು ಯೋಜಿಸಿದ್ದೇವೆ. ನಾವಿಕ ೨೦೧೭ ಸಮ್ಮೇಳನದಲ್ಲಿ, ಕನ್ನಡ ಭಾಷೆ, ಸಂಸ್ಕೃತಿ, ಸೊಬಗು, ಬೆಡಗು, ಬೆರಗುಗಳನ್ನುಬಿಂಬಿಸುವ ಹಲವಾರು ಕಾರ್ಯಕ್ರಮಗಳು, ಮೃಷ್ಟಾನ್ನ ಭೋಜನ, ಮೆರವಣಿಗೆ, ಚಿಂತನೆ, ಚರ್ಚೆ, ಸಾಹಿತ್ಯ, ನೃತ್ಯ, ನಾಟಕ, ಗಾಯನ ಎಲ್ಲವು ಇದೆ.  ಇದಲ್ಲದೆ ವೈದ್ಯಕೀಯ, ಬಂಡವಾಳ ಹೂಡಿಕೆ, ಮುಂತಾದ ವಿಚಾರ ಸಂಕಿರಣಗಳಿಗೂ, ಮನ ಮಂಥನಗಳಿಗೂ ಈ ವೇದಿಕೆಯಲ್ಲಿ ಅವಕಾಶವಿದೆ. ಈ ಸಮ್ಮೇಳನವನ್ನು ಅಮೆರಿಕಾದ ಅನಿವಾಸಿ ಕನ್ನಡಿಗರಲ್ಲದೆ, ಕರ್ನಾಟಕದಿಂದ, ಹಾಗು ಇತರ ವಿದೇಶಗಳಿಂದ ಖ್ಯಾತ ಕನ್ನಡ ಸಾಹಿತಿಗಳು, ಕಲಾವಿದರು,ಗೌರವಾನ್ವಿತ ಗಣ್ಯರು, ನಡೆಸಿಕೊಡುವರು.

ಎಲ್ಲರಿಗೂ ಕನ್ನಡದ ದೀಪ ಹಚ್ಚಿ, ಹೃತ್ಪೂರಕ ಸ್ವಾಗತವನ್ನು ಕೋರುತ್ತೇನೆ. ನಮ್ಮ ಸ್ವಾಗತ ಮತ್ತು ಆಥಿತ್ಯವನ್ನು ಸ್ವೀಕರಿಸಿ, ನಿಮ್ಮ ಮನೆ ಮಗಳ ಮದುವೆಯೆಂದು ತಿಳಿದು ಸಂತಸಪಡಿ.

ತೆರೆದಿದೆ ಮನೆ, ಓ ಬಾ ಅತಿಥಿ……

ವಿಶ್ವ ಭಾರತಿಗೆ ಕನ್ನಡದಾರತಿ, ಮೊಳಗಲಿ ಮಂಗಳ ಜಯಭೇರಿ

ಜಯ ಭಾರತೀ!

ಜೈ ಕನ್ನಡಾಂಬೆ

 

ರಮೇಶ್ ಮೇಲ್ಕೋಟೆ

ಸಂಚಾಲಕರು

ನಾವಿಕ ಡಲ್ಲಾಸ್ ೨೦೧೭

My dear Kannada brothers and sisters,

It gives me great pleasure to address, invite and welcome each and every one of you on behalf of the team of organizers and the NAVIKA Board to the NAVIKA 4th World Kannada Conference (WKC) being held in Dallas, Texas, USA.  The three-day extravaganza is scheduled for Friday, September 1st through Sunday, September 3rd 2017, as is customary ahead of the Labor Day holiday in the US which falls on Monday September 4th.    In addition to showcasing our local talent within the US, we will have star artists and dignitaries from India and around the world providing non-stop variety entertainment and cultural immersion.  The organizers will also be hosting youth, spiritual and business forums to name a few and booths and exhibits providing a glimpse of our own “doDDakere maidaana” exhibition for you to indulge in.

I am also delighted to inform you that the NAVIKA 4th World Kannada Conference has received firm commitment of support from Government of Karnataka in India, the Kannada Art and Culture department, Kannada Pradhikara Department. This undoubtedly propels us further in executing our vision to enrich, promote and celebrate Kannada culture and heritage on a world platform, while emphasizing the focus on the unique millennial generation, the future of global Kannadigas.

The strong support and unwavering cooperation extended by the Houston Kannada Vrinda, the Austin Kannada Sangha, the San Antonio Kannada Koota as well as the dozens of Kannada organizations outside of Texas are what makes an event of this magnitude possible.  You not only grace us with all your wonderful talent, but are also a source for volunteers and long lasting acquaintances, friendships and partnerships that we all will cherish for a long time.

This is an event by Kannadigas, for Kannadigas about everything Kannada.  Let’s all get together as one Kannada family and continue to propel and propagate the sweet essence that is the Kannada language in the country we now call our home far far away from our motherland.

Jai Karnataka!

Jai Kannada!

 

Yours truly,

Ramesh Melkote

Convener,

NAVIKA Dallas 2017